ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಮತ್ತು ನಗರದ "ಬ್ಯೂಟಿ ಪ್ಲಾನೆಟ್" ಮಳಿಗೆ ಇವರ ಸಹಭಾಗಿತ್ವದಲ್ಲಿ ಮಹಿಳಾ ಸಬಲೀಕರಣದ ಆಶಯದಿಂದ ನಗರದ ಸೇಫ್ರನ್ ಹೋಟೆಲಿನ ಸಭಾಂಗಣದಲ್ಲಿ ಬ್ಯೂಟಿಷಿಯನ್ ಗಳ ತರಬೇತಿ ಮತ್ತು ಪ್ರಾತ್ಯಕ್ಷಿಕೆ ದಿನಪೂರ್ತಿ ನಡೆಯಿತು. ಈ ಕಾರ್ಯಾಗಾರಕ್ಕೆ ಇನ್ನೂರಕ್ಕೂ ಹೆಚ್ಚು ವೃತ್ತಿಪರರು ಮತ್ತು ಹೊಸ ಆಸಕ್ತರು ಹಾಜರಿದ್ದರು.
ಮುಖ್ಯ ಅತಿಥಿಗಳಾಗಿ ಮಿಸ್ಸೆಸ್ ಇಂಡಿಯಾ ಫಿನಾಸೆ ಕ್ರೌನ್ ವಿನ್ನರ್ ಖ್ಯಾತಿಯ ಬೆಡಗಿ ಡಾ.ಪ್ರತಿಭಾ ಸಾಲ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರು ಯುವ ಬ್ಯೂಟಿಷಿಯನ್ ಗಳಿಗೆ ಉದ್ಯಮಶೀಲತೆಯ ಬಗ್ಗೆ ಮಾತನಾಡಿ ಉತ್ತೇಜನ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಅಂತರ್ದೇಶಿಯ ಖ್ಯಾತಿಯ ಚೇತನ ಸಾಲ್ಯಾನ್, ಮುಂಬೈ ಸಿನಿಮಾ ತಾರೆಯರ ಆರ್ಟಿಸ್ಟ್ ಸೂರಜ್ ಯಾದವ್, ದುಬೈಯಲ್ಲಿ ಅಂದಗಾರಿಕೆ ತರಬೇತಿ ಪಡೆದ ನಂದನ ಆಗಮಿಸಿ ನೋಂದಾಯಿತ ಯುವ ಬ್ಯೂಟಿಷಿಯನ್ಗಳಿಗೆ ತರಬೇತಿ ಮತ್ತು ಉದ್ಯಮದ ಇತ್ತೀಚಿನ ಬೆಳವಣಿಗೆಗಳನ್ನು ಪರಿಚಯಿಸಿ ಅವರ ಉದ್ಯಮದ ಮುಂದಿನ ಸೇವಾಗುಣಮಟ್ಟವನ್ನು ಹೆಚ್ಚಿಸಲು ಸಲಹೆ ನೀಡಿದರು. ಪ್ರಾಯೋಜಕರ ಪರವಾಗಿ ಟಾಟಾ ಇನ್ಸೂರೆನ್ಸಿನ ಅಧಿಕಾರಿಗಳು ಮತ್ತು ಬ್ಯೂಟಿ ಪ್ಲಾನೆಟ್ ಕಡೆಯಿಂದ ಜಗದೀಶ್ ಅವರು ಹಾಜರಿದ್ದರು.
Comments (0)
Post Comment
Report Abuse
Be the first to comment using the form below.