(JavaScript required to view this email address)
Mangalore

News & Articles

ಶ್ರೀಮತಿ ಸುಮಿತ್ರಾ ವೀ ಹುಣಸಿಮರದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನವರು. ಇವರ ಓದು ಎನ್.ಟಿ.ಸಿ, ಬಿ.ಎ,ಬಿ ಎಡ್, ಎಂ.ಎ. ವೃತ್ತಿಯಲ್ಲಿ ಕನ್ನಡ ಭಾಷಾ ಶಿಕ್ಷಕಿ .ತಂದೆ ಭೀಮಪ್ಪ (ಕಲಾವಿದರು); ತಾಯಿ ಶಂಕ್ರಮ್ಮ. ಪತಿ ವೀರಣ್ಣ.
ಮಕ್ಕಳು ಸೃಷ್ಠಿ ಮತ್ತು  ಮಗ ಪೃಥ್ವಿರಾಜ. (ಇಬ್ಬರೂ ಪ್ರತಿಭಾನ್ವಿತರು. ಸಂಗೀತ, ಡಾನ್ಸ್, ಹಾಡು, ಕರಾಟೆ ಅವರ ಹವ್ಯಾಸ )
ಸಾಹಿತ್ಯ ಸಾಧನೆ:
ಶ್ರೀಮತಿ ಸುಮಿತ್ರಾ ವೀ ಹುಣಸಿಮರದ 26 ವರ್ಷಗಳಿಂದ ಸ್ವರಚಿತ ಕವನ, ಕಥೆ, ನಾಟಕ ಬರೆಯುತ್ತಿರುವರು. ಈಗೀಗ ಸಾಹಿತ್ಯದ ಅನೇಕ ಪ್ರಕಾರಗಳಾದ ಟಂಕಾ, ರುಬಾಯಿ, ಆಧುನಿಕ ವಚನ, ಚುಟುಕು, ಭಾವಗೀತೆ, ಜಾನಪದ ಗೀತೆ, ಮುಕ್ತಕ ಹೀಗೆ ಹೊಸ ಹೊಸ ಪ್ರಕಾರಗಳನ್ನು ಕಲಿತು ಬರೆಯುತ್ತಿರುವರು.
ಸಾಂಸ್ಥಿಕ ಚಟುವಟಿಕೆಗಳು
ರಂಗೋಲಿ ಬಿಡಿಸುವುದು, ನಾಟಕ ಮಾಡಿಸುವುದು, ಭಾಷಣ ಮಾಡುವುದು, ಹಾಡುವುದು ಅವರ ಕೆಲವು ಪ್ರವೃತ್ತಿಗಳು.
ಪ್ರಶಸ್ತಿ - ಪುರಸ್ಕಾರಗಳು
ಚಾಲುಕ್ಯ ಸಾಹಿತ್ಯರತ್ನ ( ರಾಜ್ಯ ಪ್ರಶಸ್ತಿ), ಕಾವ್ಯ ಚೇತನ ಪ್ರಶಸ್ತಿ,ಸೌರ್ಹಾದತಾ ಪ್ರಶಸ್ತಿ, ವಚನ ರತ್ನ ಪ್ರಶಸ್ತಿ, ಬರಹ ರತ್ನ, ಅತ್ಯುತ್ತಮ ಶಿಕ್ಷಕ ರತ್ನ ಪ್ರಶಸ್ತಿ (ರಾಷ್ಟ್ರಮಟ್ಟದ್ದು), ಆದರ್ಶ ಶಿಕ್ಷಕಿ ಪ್ರಶಸ್ತಿ (ರಾಜ್ಯ ಘಟಕ), ೨೦೨೫ ನೇ ಸಾಲಿನ ಕಾವ್ಯಶ್ರೀ ಪ್ರಶಸ್ತಿ (ರಾಷ್ಟ್ರಮಟ್ಟದ್ದು,) ಸ್ಪೂರ್ತಿ ಶ್ರೀ ಪ್ರಶಸ್ತಿ, ಬಸವ ಶ್ರೀ ಪ್ರಶಸ್ತಿ ಇನ್ನೂ ಮುಂತಾದ ಸಂಘ ಸಂಸ್ಥೆಗಳಿಂದ ಬಿರುದು ಮತ್ತು ಸನ್ಮಾನ ಪಡೆದಿದ್ದಾರೆ. 16/03 2025 ರಂದು 2025 ನೇ ಸಾಲಿನ  ರಾಷ್ಟ್ರಮಟ್ಟದ ಕಾವ್ಯಶ್ರೀ ಪ್ರಶಸ್ತಿ, ಸ್ಪೂರ್ತಿ ಶ್ರೀ ಪ್ರಶಸ್ತಿ, ಬಸವ ಶ್ರೀ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಅವರು ಮುಡಿಗೇರಿಸಿಕೊಂಡಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಶ್ರೀಮತಿ ಸುಮಿತ್ರಾ ವೀ ಹುಣಸಿಮರದ ಅವರ ಯಶಸ್ಸು ಇನ್ನೂ ಎತ್ತರಕ್ಕೆ ಏರಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು. 


ಬಹುಮುಖ ಪ್ರತಿಭೆಯ ಶ್ರೀಮತಿ ಸುಮಿತ್ರಾ ವಿ ಹುಣಸಿಮರದ
ಪರಿಚಯಿಸಿದವರು 
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ಬಹುಮುಖ ಪ್ರತಿಭೆಯ ಶ್ರೀಮತಿ ಸುಮಿತ್ರಾ ವಿ ಹುಣಸಿಮರದ
ಬಹುಮುಖ ಪ್ರತಿಭೆಯ ಶ್ರೀಮತಿ ಸುಮಿತ್ರಾ ವಿ ಹುಣಸಿಮರದ

Comments (0)




Be the first to comment using the form below.