ಹವ್ಯಾಸಕ್ಕಾಗಿ ಬೆಳೆಸಿಕೊಂಡ ಬರವಣಿಗೆ ನನ್ನನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿ ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು ಮೂಡಿಸಿತು. ಅದರಲ್ಲೂ ಮಕ್ಕಳ ಸಾಹಿತ್ಯ ಬಗ್ಗೆ ಬರೆಯುವುದೆಂದರೆ ಏನೋ ಒಂದು ರೀತಿಯ ಖುಷಿ. ಆಧುನಿಕ ಕಾಲಘಟ್ಟದಲ್ಲಿ ದೂರದರ್ಶನ ಹಾಗೂ ಮೊಬೈಲ್ ಮಕ್ಕಳನ್ನು ಪುಸ್ತಕದಿಂದ ಬಹಳಷ್ಟು ದೂರವಿಟ್ಟಿದೆ ಎಂದರೆ ತಪ್ಪಾಗಲಾರದು. ಎಳೆಯರಿಂದಲೇ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿದರೆ ಅದಕ್ಕಿಂತ ಉತ್ತಮ ಹವ್ಯಾಸ ಮತ್ತೊಂದಿಲ್ಲ. ಆಧುನಿಕತೆಯ ಅವಶ್ಯಕತೆ ಪೂರೈಸಲು ಇಂದಿನ ಕಾಲದಲ್ಲಿ ಒಬ್ಬರ ದುಡಿಮೆ ಸಾಕಾಗದೆ ಪೋಷಕರಿಬ್ಬರೂ ದುಡಿಯಲು ಹೊರಹೋಗಬೇಕಾಗುತ್ತದೆ. ಆದ್ದರಿಂದ ಪೋಷಕತ್ವ ಅನ್ನುವುದು ಮೊದಲಿನಷ್ಟು ನಿರಾಳವಾಗಿ ಉಳಿದಿಲ್ಲ. ಇಂತಹ ಸಂದರ್ಭದಲ್ಲಿ ಈ ಪುಸ್ತಕ ಮಕ್ಕಳಿಗೆ ಸಹಾಯಕಾರಿಯಾಗಬಹುದೆಂಬ ಯೋಚನೆಯಿಂದ ನೀತಿ ಪ್ರೀತಿ ಬದುಕಿನ ಮೌಲ್ಯಗಳು ಶಿಸ್ತು ಬಾಂಧವ್ಯ ಸಂಬoಧ ಆಸೆ ಹಾಗೂ ಕೆಲವು ಕಲಿಕೆಗಳನ್ನು ಶಿಶುಗೀತೆ ಹಾಗೂ ಕಥನ ಕವನದ ಮೂಲಕ ಪ್ರಸ್ತುತಪಡಿಸಿ ಸುಲಭವಾಗಿ ಮನದಟ್ಟಾಗುವಂತೆ ಪೋಣಿಸಿರುತ್ತೇನೆ .ಇನ್ನು ಕೃತಿಯ ಬಗ್ಗೆ ವಿಮರ್ಷಿಸ ಬೇಕಾದವರು ನೀವು. ಭಾವಗಳು ಮನದಲ್ಲಿ ಮೂಡಿದಾಗ ಅಲ್ಲೊಂದು ಭಾವನೆಯ ಸಂಘರ್ಷವಾಗುತ್ತದೆ. ಅದೇ ಭಾವಗಳು ಅಕ್ಷರದೊಂದಿಗೆ ಬಂಧಿಯಾದಾಗ ಅದೊಂದು ಕವನವೋ ಕಾವ್ಯವೋ ಆಗಿ ರೂಪು ತಾಳುತ್ತದೆ. ಆ ಎಲ್ಲಾ ಭಾವ ಬಂಧನಗಳ ಅಕ್ಷರಗಳನ್ನು ಆಚ್ಚೊತ್ತಿದ್ದಾಗ ಅದೊಂದು ಕೃತಿಯಾಗುತ್ತದೆ. ಆದರೆ ಆ ಕೃತಿಗೆ ಭಾವಜೀವಿಯ ಆಸರೆಗಳು ಶುಭ ಹಾರೈಕೆಗಳು ಬೇಕಾಗುತ್ತದೆ. ಹೀಗೆ ಸಾಹಿತ್ಯ ಲೋಕದಲ್ಲಿ ಪುಟ್ಟ ಹೆಜ್ಜೆ ಇಡುತ್ತಿರುವ ನನಗೆ ಅನೇಕ ಹೃದಯವಂತರ ಸಹಕಾರ ಲಭಿಸಿದೆ. ನಿಮ್ಮೆಲ್ಲರ ಸಹಕಾರದ ಸಮ್ಮಿಲನದಿಂದ ಈ ಕೃತಿ ಬಿಡುಗಡೆಯಗಿ ಹೊರಬಂದಿದೆ.
ಬೆರಗು ಚುಕ್ಕಿ ಕೃತಿ ಮಕ್ಕಳ ಸಾಹಿತ್ಯಕ್ಕೆ ನನ್ನದೊಂದು ಕಿರು ಕೊಡುಗೆ ಶಿಶುಗೀತೆ ಹಾಗೂ ಕಥನ ಕವನಗಳು ಮುಗ್ಧ ಮನಗಳನ್ನು ಬೆರಗುಗೊಳಿಸುವ ಸಾಂದರ್ಭಿಕ ಬರಹವಾಗಿ ಮೂಡಿಬಂದಿದೆ ಎಂಬುದು ಅನಿಸಿಕೆ ನನ್ನದು . ಬರೆದ ಶಿಶುಗೀತೆ ಹಾಗೂ ಕಥನ ಕವನಗಳನ್ನು ಓದಿ ವಿಮರ್ಷತ್ಮಾಕವಾಗಿ ಮುನ್ನಡಿ ಬರೆದು ಹರಸಿದ ಕವಿ ಮಿತ್ರೆ ಶ್ರೀಮತಿ ಸರಿತಾ ಅಂಬರೀಷ್ ರವರಿಗೆ ತುಂಬು ಮನದ ಧನ್ಯವಾದಗಳು. ಹಾಗೆಯೇ ಸದಾ ನನ್ನ ಬರಹಗಳನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಿದ್ದ ನನ್ನ ಇನೋರ್ವ ಗೆಳತಿ ವೀಣಾ ಪ್ರಭಾಕರ್ ಕಡೆಕಾರು ಬೆನ್ನುತಟ್ಟಿ ಬೆನ್ನುಡಿ ಬರೆದು ಹರಿಸಿದಾರೆ ಅವರಿಗೂ ತುಂಬು ಹೃದಯದ ಧನ್ಯವಾದ ಅರ್ಪಣೆ.
ಸಾಹಿತ್ಯದ ಬರವಣಿಗೆಯ ಬೆಳವಣಿಗೆಯನ್ನು ಗಮನಿಸಿ ಇನ್ನೂ ಬರೆಯುವಂತೆ ಸಹಕಾರ ನೀಡಿ ಉತ್ತೇಜಿಸಿದ ನನ್ನ ವೃತ್ತಿಯೊಳಗಣದ ಪರಿವಾರ ಅಂದರೆ ಎಸ್.ಡಿ ಎಂ ಕುಟುಂಬದ ಸಹೃದಯಿ ಬಂಧುಗಳಿಗೆ ಮನದಾಳದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ನನ್ನ ಬರವಣಿಗೆಗೆ ಸ್ಪೂರ್ತಿ ನೀಡಿ ನನ್ನನ್ನು ಈ ಹಂತದವರೆಗೆ ಬೆಳೆಸಿದ ಬತ್ತದ ತೊರೆ ಸ್ನೇಹ ಬಳಗ ಬೆಂಗಳೂರು ಇದರ ಮುಖ್ಯಸ್ಥೆ ಶ್ರೀಮತಿ ತುಳಸಿ ನವೀನ್ ರವರಿಗೆ ಗೌರವಪೂರ್ವಕ ವಂದನೆಗಳು.
ಬರೆಯಲು ಪ್ರೋತ್ಸಾಹ ನೀಡಿದ ನನ್ನ ಕುಟುಂಬ ವರ್ಗದವರಿಗೆಲ್ಲರಿಗೂ ಕೃತಜ್ಞತೆಗಳು ಹಾಗೆಯೇ ಸುಂದರ ಮುದ್ರಣದೊಂದಿಗೆ ಪ್ರೀತಿಯಿಂದ ಅತೀ ಕಡಿಮೆ ಸಮಯದಲ್ಲಿ ಕೃತಿ ಮುದ್ರಿಸಿ ಕೃತಿ ಅನಾವರಣಗೊಳಿಸಲು ಅವಕಾಶ ಮಾಡಿಕೊಟ್ಟ ಕಥಾಬಿಂದು ಪ್ರಕಾಶನದ ಸಂಸ್ಥಾಪಕ ಲೇಖಕ ಹಾಗೂ ಕಾದಂಬರಿಗಾರರೂ ಸಂಘಟಕರು ಅದ ಶ್ರೀ ಪಿ ಬಿ ಪ್ರದೀಪ್ ಕುಮಾರ್ ಸರ್ ರವರಿಗೂ ಅನಂತಾನoತ ಧನ್ಯವಾದಗಳು.
Comment (1)
Post Comment
Report Abuse
ಕುವಿಕು ಕಣ್ವತೀರ್ಥ commented on October 29th, 2025 at 7:47 AM
ಬೆರಗು ಚುಕ್ಕಿ
ಶೋಭಾ ದಿನೇಶ್ ಉದ್ಯಾವರ ಬರೆತಿನ ಜೋಕ್ಲೆಗಾದ್ ಕನ್ನಡ ಶಿಶು ಗೀತೆ,ಕಥನ ಕವನ ಮಸ್ತಿರೆ ಬುಡ್ಪಾನಗ ಜೋಕ್ಲೆಗಾದ್ ಆರ್ ಬರೆತಿನ ಕಬಿತೆಲು ಕುಷಿಕೊರುಂಡು. ಸುರೂತ ಕಬಿತೆ ಗಣಪನ ಪೂಜೆದೊಟ್ಟಿಗೆ ಸುರುವಾಪುಂಡು.ಬಾಲೆ ಮನಸ್ಗ್ ಗಂಪತಿ ಜೋಜದ ಗುರ್ತಪತ್ತಾವುನ ಪ್ರಯತ್ನ ಈ ಕಬಿತೆಡ್ ಮಂತ್ದೆರ್,ರೈಲ್,ಬಾನ,ಮುಗಲ್,ಬರ್ಸ,ನೇಸರೆ,ಅಜ್ಜಬಿರು ಇಂಚ ಜೋಕುಲೆಗ್ ಪೊಲಬು ಮಲ್ಪುನ,ಮರ ಕಡ್ಪೆರೆ ಬಲ್ಲಿ ಪನೊಂದು ಪಸಂತ್ರೊದ ರಕ್ಷಣೆದ ಕೆಬಿಪಾತೆರ,ಪರೋಪಕಾರ,ಸೇವೆದ ನೆಂಪು ಪುಟ್ಟಾವುನ ಪದ, ಕಬಿತೆದ ಒಟ್ಟಿಗೆ ಕತೆನ್ ಪನ್ಪುನ ಕುಸೆಲ್ ಬಾರಿ ಸೋಕಾತ್ಂಡ್.ಜೋಕುಲೆಗ್ ಪುರ್ಪದ ಗುರ್ತ ಮಂತ್ ಕೊರ್ಪುನ ಕಬಿತೆಲಾ ಉಂಡು.ಕೆಲವು ಪದ ಮಲ್ಲಕುಲು ಜೋಕ್ಲೆಗ್ ಪನ್ಪುನ ಪದತ ಲೆಕ ಆತ್ಂಡ್.
ಜೋಕುಲೆ ಪದ ಬರೆಪುನ ಆತ್ ಸುಲಭದ ಬೇಲೆ ಅತ್ತ್,ನಮ ಜೋಕುಲಾಂಡನೇ ಜೋಕುಲೆ ಪದ ಬರೆಯೊಲಿ,ಇಂಚಿನ ಬೇಲೆನ್ ಶೋಭಾ ದಿನೇಶ್ ಉದ್ಯಾವರ್ ಮಂತ್ದೆರ್.ಜೋಕುಲೆನ ಪದ ಬರೆಂಡ ಯಾವಂದ್ ಅಯಿನ್ ಜೋಕ್ಲೆಗ್ ಎತ್ತಾವೊಡು,ಜೋಕ್ಲೆನ ಬಾಯಿಡ್ ಪನ್ಪಾವೊಡು,ಅಪಗನೇ ಅರೆನ ಬೇಲೆ,ಉಡಲ್ದ ಅಂಗಲಪ್ಪು ಕೋಡಿ ಎತ್ತು.ಈ ಪ್ರಯತ್ನ ಸಾಹಿತ್ಯ ಅಭಿಮಾನಿಲು ಮನ್ಪೊಡು. ಉಂದುವೇ ಅರೆಗ್ ಕೊರ್ಪುನ ಉಮೇದ್ದ ಬೆರಿಸಾಯ. ಶೋಭಕ್ಕನ ಬರವುಗು ಉಡಲೋರ್ಮೆದ ಎಡ್ಡೆಪ್ಪುಲು.
ಕುವಿಕು ಕಣ್ವತೀರ್ಥ
27-11-2025