(JavaScript required to view this email address)
Mangalore

News & Articles

ಶಿಕ್ಷಕ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕಥಾಬಿಂದು ಪ್ರಕಾಶನ  ಪ್ರದೀಪ್‌ ಕುಮಾರ್‌ ಅವರ ಸಾರಥ್ಯದಲ್ಲಿ ಸಾಹಿತ್ಯೋತ್ಸವವನ್ನು ಆಯೋಜಿಸಿದೆ. ವಿವರಗಳು ಇಂತಿವೆ:
1.ಸ್ಥಳ: ಸ್ಕೌಟ್‌ ಮತ್ತು ಗೈಡ್ಸ್‌ ಭವನ, ಲಾಲ್‌ ಬಾಗ್‌, ಉರ್ವ ಕೆನರ ಹೈಸ್ಕೂಲು ಸಮೀಪ, ಮಂಗಳೂರು
2.ತಾರೀಕು: 26.10.2025 ಬೆಳಗ್ಗೆ 9 ಗಂಟೆಯಿಂದ ಸಂಜೆ 8 ಗಂಟೆ ವರೆಗೆ  ಈ ಸಂದರ್ಭದಲ್ಲಿ ಶಿಕ್ಷಕರಿಗೆ ಶಿಕ್ಷಕರತ್ನ  ರಾಜ್ಯ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಬಂದ ಅರ್ಜಿಗಳ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದು.  

ಮಾನದಂಡಗಳು

25 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರಬೇಕು . ಈ ಕೆಳಗಿನ  ನಿಗದಿತ ಸಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು ಸಂಘಟಕರು ಕಾರ್ಯಕ್ರಮದ ದಿನ ಬೆಳಗ್ಗಿನ ಉಫಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಾರೆ. ಬಂದು ಹೋಗುವ ಖರ್ಚು ಮತ್ತು ಇತರ ಖರ್ಚುಗಳು ಸಾಧಕರೇ ಭರಿಸಬೇಕು. 

ಅರ್ಜಿ ನಮೂನೆ

ಕ್ರಮ ಸಂಖ್ಯೆಮಾಹಿತಿ
1 ಅರ್ಜಿದಾರರ ಹೆಸರು ವಿಳಾಸ, ಮೊ ನಂ
2ವಯಸ್ಸು  ಮತ್ತು ಸೇವೆ ಸಲ್ಲಿಸಿದ ಅವಧಿ (ವರ್ಷಗಳಲ್ಲಿ)
3 ಶಾಲೆಯ ವಿಳಾಸ ಮತ್ತು ಮುಖ್ಯ ಶಿಕ್ಖಕರ/ ಸಹ ಶಿಕ್ಷಕರ ಹೆಸರು ಮತ್ತು ಸಂಪರ್ಕ ಸಂಖ್ಯೆ
4ತಾಲೂಕು,/ಜಿಲ್ಲಾ,/ ರಾಜ್ಯ ಮಟ್ಟದ/ ಇಲಾಖಾ ಪ್ರಶಸ್ತಿ ಬಂದಿದ್ದರೆ ವಿವರಗಳು (ಪುರಾವೆ ಒದಗಿಸಬೇಕು) 
5ಅರ್ಜಿ ಕಳಿಸಿದ ದಿನಾಂಕ
ನಿಮ್ಮಈ  ಅರ್ಜಿಯ ಮೇಲೆ ಶಾಲೆಯ ಮೊಹರನ್ನು ಲಗತ್ತಿಸಿ ನಿಮ್ಮ ಸಹಿಮಾಡಿ  ಅಂಚೆ ಮುಖಾಂತರ ಕೆಳಗಿನ ವಿಳಾಸಕ್ಕೆ ಸಾದಾ ಅಂಚೆಯ ಮೂಲಕ ಕಳಿಸಬೇಕು. ಅರ್ಜಿಯ ಜೊತೆ ಆಧಾರ ಕಾರ್ಡ್ ನ ಪ್ರತಿ ಮತ್ತು ಇತರ ಇಲಾಖಾ ಪ್ರಶಸ್ತಿ ಪಡೆದ ಬಗ್ಗೆ ಪುರಾವೆಯ  ಪ್ರತಿ  ಸೆಪ್ಟಂಬರ್‌ 30 ರೊಳಗಾಗಿ  ನಮಗೆ ತಲಪಬೇಕು. ಕಾರ್ಯ ಕ್ರಮಕ್ಕೆ ಬರುವಾಗ ಅವುಗಳ ಪ್ರತಿಯನ್ನು ತರಬೇಕು. 

ಅರ್ಜಿಯನ್ನು ಕಳಿಸಬೇಕಾದ ವಿಳಾಸ 

ಪಿ. ವಿ. ಪ್ರದೀಪ ಕುಮಾರ್‌, 
ಕಥಾಬಿಂದು ಪ್ರಕಾಶನ,
ಕಲಾಶ್ರೀ , LI̧G 6,
 ಕೆ ಎಚ್‌ ಬಿ. ಕೊಲೊನಿ, 
ಕುಂಜತ್ತಬೈಲು, ಮಂಗಳೂರು ಪಿನ್‌ 575015
 ಮೊ: 9341410153. ಅರ್ಜಿಯ ಪ್ರತಿಯನ್ನು ಇದೇ ನಂಬರಿನಲ್ಲಿ whats app ಮೂಲಕ ಕೂಡ ಕಳಿಸಬೇಕು.(ವಾಟ್ಸ ಅಪ್‌ ನಲ್ಲಿ ಅರ್ಜಿಯ ಪ್ರತಿ ಮಾತ್ರ ಸಾಕು. ಅಡಕಗಳು ಬೀಕಿಲ್ಲ)

ದೃಢೀಕರಣ

ನಾನು ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ.ಈ ಮೇಲಿನ ಮಾಹಿತಿಗಳು ನನ್ನ ತಿಳುವಳಿಕೆಯಂತೆ ನಿಜವಾಗಿವೆ.

ಅರ್ಜಿದಾರರ ಸಹಿ 

ವಿಶೇಷ ಸೂಚನೆ: 

ನೀವು ಕಳಿಸಿದ ಅರ್ಜಿ ತಲಪಿದೊಡನೆ ಪರಿಶೀಲಿಸಿ ಆಯ್ಕೆಯ ಬಗ್ಗೆ ಪಟ್ಟಿಯನ್ನು ಕಥಾಬಿಂದು ಪ್ರಕಾಶನ ಶಿಕ್ಷಕರತ್ನ ಪ್ರಶಸ್ತಿ 2025 ಬಳಗದಲ್ಲಿ ಬಿತ್ತರಿಸಲಾಗುವುದು. ಯಾವುದೇ ಪತ್ರ ವ್ಯವಹಾರ ಮತ್ತು ಮೊಬೈಲ್‌ ಕರೆಗೆ ಅವಕಾಶವಿರುವುದಿಲ್ಲ. ಆಯ್ಕೆ ಪಟ್ಟಿಯಲ್ಲಿ ಹೆಸರು ಪ್ರಕಟವಾದರೆ ಅದನ್ನೇ ಆಮಂತ್ರಣವೆಂದು ಪರಿಗಣಿಸಿ ಪ್ರಯಾಣ ವ್ಯವಸ್ಥೆ ಮಾಡಿಕೊಳ್ಳಬಹುದು. ಆಯ್ಕೆಯಾದವರು ಬರಲು ಅಸಾಧ್ಯವೆಂದಾದರೆ ಕೂಡಲೆ ವಾಟ್ಟ ಅಪ್‌ ಮುಖಾಂತರ ತಿಳಿಸಬೇಕು.

ಶಿಕ್ಷಕ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Comments (2)




ರಆ

ರೇವತಿ ಆರ್ ವೈದ್ಯ commented on September 28th, 2025 at 5:50 PM 
ನಾನು ಭಟ್ಕಳ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿಯಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ 2025 ಡಿಸೆಂಬರ್ ತಿಂಗಳಲ್ಲಿ ನಿವೃತ್ತಿಯಾಗಿರುತ್ತೇನೆ.



ರಆ

ರೇವತಿ ಆರ್ ವೈದ್ಯ commented on September 28th, 2025 at 5:50 PM 
ನಾನು ಭಟ್ಕಳ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿಯಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ 2025 ಡಿಸೆಂಬರ್ ತಿಂಗಳಲ್ಲಿ ನಿವೃತ್ತಿಯಾಗಿರುತ್ತೇನೆ.