ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಕೇರಳ ರಾಜ್ಯ ಚು.ಸಾ.ಪ ದ. ಕ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಎರಡನೆಯ ಮನೆ- ಮನೆ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಡಾ ಕೊಳ್ಚಪ್ಪೆ ಗೋವಿಂದ ಭಟ್ ಅವರ ಮನೆ, ಕ್ಯಾಟ್ ಹಿಲ್ ಕ್ರೆಸ್ಟ್ ಅಪಾರ್ಟ್ಮೆಂಟ್, ಪ್ಲಾಟ್ ನಂಬರ್ 202, ಮೂರನೇ ಅಡ್ಡರಸ್ತೆ, ಹಾಟ್ ಹಿಲ್ ರಸ್ತೆ, ಚಿಲಿಂಬಿ, ಮಂಗಳೂರು ಇಲ್ಲಿ ಜುಲೈ 27ರಂದು ಅಪರಾಹ್ನ 3:00 ಗಂಟೆಗೆ ಆಯೋಜಿಸಲಾಗಿದೆ. ಸಾಹಿತ್ಯ ಸಂಭ್ರಮದ ಅಧ್ಯಕ್ಷತೆಯನ್ನು ಶ್ರೀ ಕಲ್ಲಚ್ಚು ಮಹೇಶ್ ಆರ್ ನಾಯಕ್ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಡಾ ವಾಮನ್ ರಾವ್ ಬೇಕಲ್ ಮತ್ತು ಶ್ರೀಮತಿ ಸಂಧ್ಯಾರಾಣಿ ಟೀಚರ್ ನಡೆಸಿ ಕೊಡುವರು. ಹಿರಿಯ ಸಾಹಿತಿ ಡಾ. ವಸಂತಕುಮಾರ್ ಪೆರ್ಲ, ಸಂಸ್ಥೆಯ ರಾಜ್ಯ ಸಂಚಾಲಕರುಗಳಾದ ಶ್ರೀ ಜಯನಂದ ಪೆರಾಜೆ ಮತ್ತು ಡಾ ಶಾಂತ ಪುತ್ತೂರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಅಂಚೆ ಕುಂಚಾ ಸ್ಪರ್ಧೆಯ ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಕಲಾವಿದ ಬಿ ಕೆ ಮಾಧವ ರಾವ್ ಮಂಗಳೂರು, ಆಕಾಶವಾಣಿಯಿಂದ ಇತ್ತೀಚೆಗೆ ನಿವೃತ್ತಿ ಹೊಂದಿರುವ ಶ್ರೀ ಪಿ ಸೂರ್ಯನಾರಾಯಣ ಭಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ & ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ "ಪುಸ್ತಕ ಸೊಗಸು" ಬಹುಮಾನಕ್ಕೆ ಭಾಜನರಾದ ಕಥಾಬಿಂದು ಪ್ರಕಾಶನದ ಶ್ರೀ ಪಿವಿ ಪ್ರದೀಪ್ ಕುಮಾರ್ ಈ ಮೂವರು ಸಾಧಕರಿಗೆ ವಿಶೇಷ ಸನ್ಮಾನ ನಡೆಯುಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆ ಬಳಿಕ ಕವಿಗೋಷ್ಠಿ ಕಾರ್ಯಕ್ರಮವಿರುತ್ತದೆ.
ಶ್ರೀಮತಿ ಕಸ್ತೂರಿ ಜಯರಾಮ್ ಕಾರ್ಯಕ್ರಮ ನಿರ್ವಹಿಸುವರು.
ಇತ್ತೀಚೆಗೆ ಪ್ರಾರಂಭವಾದ ಈ ಮಾಸಿಕ ಉಪಕ್ರಮಕ್ಕೆ ಸಾಹಿತ್ಯ ಆಸಕ್ತರು ಹೆಚ್ಚಿನ ಆಸಕ್ತಿ ಮತ್ತು ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.
Comments (0)
Post Comment
Report Abuse
Be the first to comment using the form below.