(JavaScript required to view this email address)
Mangalore

News & Articles

ಶ್ರೀಮತಿ ಲತಾ ಎ ಆರ್
ನರಸಿಂಹರಾಜಪುರ ತಾಲೂಕು ಚಿಕ್ಕಮಗಳೂರು ಜಿಲ್ಲೆಯವರು. ಕವಿ, ಲೇಖಕಿ, ಪ್ರಬಂಧಗಾರ್ತಿ ಮತ್ತು ಸಮಾಜ ಸೇವಕಿ. ಗೃಹಿಣಿಯಾಗಿ 350 ಹೆಣ್ಣು ಮಕ್ಕಳಿಗೆ ಟೈಲರಿಂಗ್ ವೃತ್ತಿ ಕಲಿಸಿದ್ದಾರೆ.  500ಕ್ಕು ಹೆಚ್ಚು ಮಕ್ಕಳಿಗೆ ಮನೆಪಾಠ ಮಾಡಿದ್ದಾರೆ  ಒಂದೂವರೆ ವರ್ಷದ ಅವಧಿಯಲ್ಲಿ ತಾಲ್ಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯ ಮಟ್ಟ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ. 750ಕ್ಕು ಹೆಚ್ಚು ಕವನ ಚುಟುಕು ಲೇಖನ ಬರೆದಿದ್ದು 6 ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಈ ಕ್ರಿಯಾಶೀಲ ಪ್ರತಿಭಾವಂತೆ ಹಲವು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಮುಖ್ಯವಾದಗಳು ಇಂತಿವೆ:
1)ರಾಯಚೂರಿನಲ್ಲಿ ಬೆಳಕು ಸಂಸ್ಥೆ ಯ ವತಿಯಿಂದ ರಾಷ್ಟ್ರಮಟ್ಟದ ಕವಯತ್ರಿಯಾಗಿ ಸಾಹಿತ್ಯರತ್ನ ರಾಷ್ಟ್ರ ಪ್ರಶಸ್ತಿ ಪಡೆದಿರುತ್ತಾರೆ 
2)ಸಂಡೂರಿನ ತಾಳೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರ ಪ್ರಶಸ್ತಿ ಪಡೆದಿರುತ್ತಾರೆ 
3)ಕರ್ನಾಟಕ ಲೇಖಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಆಗಿದ್ದಾರೆ 
4)ಮಂಗಳೂರಿನ ಕಿನ್ನಿಗೋಳಿಯಲ್ಲಿ ಕವಿಗೋಷ್ಠಿ ನಡೆಸಿ ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ 
5)ಧಾರವಾಡದ ನಾಟ್ಯ ಸ್ಫೂರ್ತಿ ಕಲಾ ವೇದಿಕೆಯಿಂದ ಬಸವಶ್ರೀ  ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ  ಕುವೆಂಪು ರವರ ಕವಿಶೈಲದಲ್ಲಿ ಕವಿಗೋಷ್ಠಿ ನಡೆಸಿ ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ 
6)ಕಡೂರು ಸಕಲೇಶಪುರದ ಚುಟುಕು ಕವಿಗೋಷ್ಠಿ ಗೆ ಭಾಗಿಯಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ 
7)ಜುಲೈ 6 ನೇ ತಾರೀಕಿನಂದು ಚಾಮರಾಜನಗರ ದಲ್ಲಿ ಕರ್ನಾಟಕ ಕಲಾ ಭೂಷಣ ಪ್ರಶಸ್ತಿ ಪಡೆದಿದ್ದಾರೆ 
ಇವರ ಮನದಾಳದ ಮೌನ ಎಂಬ ಕವನ ಸಂಕಲನ ಈ ತಿಂಗಳ 27ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.
ಶ್ರೀಮತಿ ಲತಾ ಎ ಆರ್ ಬಾಳೆಹೊನ್ನೂರು ಅವರು ಬರೆದ ಕವನಗಳು ಹಲವು ಕವನ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಕಥಾಬಿಂದು ಪ್ರಕಾಶನ ಪ್ರಕಟಿಸಿದ ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಅವರ ಸಂಪಾದಿತ ಕವನ ಸಂಕಲನ "ಕಾವ್ಯ ರಂಗೋಲಿ" ಯಲ್ಲಿ ಪ್ರಕಟವಾದ ಅವರ ಕವನ ಇಲ್ಲಿದೆ:

ಅಳುತಿದೆ ಮನವು ನೆನಪಿನ ಜೋಳಿಗೆಯಲ್ಲಿ

ಬಡತನದ ಬೇಗೆಯಲಿ ತನ್ನ ಆಸರೆಗೆ ಬಂದವರೆಲ್ಲ
ದೇವನೂದೇವತೆಗಳು
ಋಣ ತೀರಿಸಲಾಗದು ಈ ಜನ್ಮದಲ್ಲಿ ಎಂಬoತೆ
ಸಿರಿತನದ ಮದವೇರುವಾಗ
ಕಡೆಗಣಿಸದಿರೂ ಕಾರಣ ಕರ್ತರ
ಒಡಲು ಬೇಯುತ್ತಿರಲು ಒಳಿತಿಗಾಗಿ
ಅವಸರಿಸದಿರು ಇದು ನಾವೆಣಿಸಿದ ಜೀವನದ ತಿರುವುಗಳಲ್ಲ
ಮೇಲೊಬ್ಬನ ಹಣೆಬರಹ ಜನ್ಮ ಜನ್ಮದ
ಪಾಪಪುಣ್ಯಾಗಳ ತೀರಿಸಲು ಅಳುತಿದೆ ಮನವು ನೆನಪಿನ ಜೋಳಿಗೆಯ
ಅವರ ಕಾವ್ಯ ಪಯಣ ಇನ್ನು ವೇಗ ಮತ್ತು ಸತ್ವ ಪಡೆಯಲಿ ಎಂಬ ಶುಭ ಹಾರೈಕೆಗಳು


ಶ್ರೀಮತಿ ಲತಾ ಎ ಆರ್ ಬಾಳೆಹೊನ್ನೂರು ಅವರಿಗೆ ಕರ್ನಾಟಕ ಕಲಾಭೂಷಣ ಪ್ರಶಸ್ತಿ
ಪರಿಚಯಿಸಿದವರು 
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ಶ್ರೀಮತಿ ಲತಾ ಎ ಆರ್ ಬಾಳೆಹೊನ್ನೂರು ಅವರಿಗೆ ಕರ್ನಾಟಕ ಕಲಾಭೂಷಣ ಪ್ರಶಸ್ತಿ
ಶ್ರೀಮತಿ ಲತಾ ಎ ಆರ್ ಬಾಳೆಹೊನ್ನೂರು ಅವರಿಗೆ ಕರ್ನಾಟಕ ಕಲಾಭೂಷಣ ಪ್ರಶಸ್ತಿ
ಬಾಳಾಜಿಯಿಂದ ಬಾಲಿವರೆಗೆ                                                                                                                                                                                                                             ಪ್ರವಾಸ ಕಥನ ಧಾರವಾಹಿ ಪ್ರಾರಂಭ ಮೊದಲನೆಯ ಕಂತು                                                                                                                                                                                                                                                                                                                                                                                                                                                                                     https://www.kathabindu.in/news-articles/balkagi-bali.html

Comments (0)




Be the first to comment using the form below.