(JavaScript required to view this email address)
Mangalore

News & Articles

ಮೈಸೂರಿನ ಬಗ್ಗೆ ಪ್ರವಾಸಕಥನ ಅಥವಾ ಲೇಖನ ಬರೆಯುವುದು ಎಂದರೆ ಸಂಸ್ಕೃತಿ, ಇತಿಹಾಸ, ಭೂದೃಶ್ಯ, ರಾಜಕೀಯ, ಕಲಾ ಪರಂಪರೆ ಎಲ್ಲವನ್ನೂ ಒಟ್ಟಿಗೆ ತರುವ ಸುವರ್ಣಾವಕಾಶ. ನಾವು ಬಾಳಾಜಿ ಎನ್ನುವ ಗ್ರಾಮದಿಂದ ಅರಮನೆಗಳ ನಗರ ಎಂದೇ ಕರೆಸಿಕೊಳ್ಳುವ ಮೈಸೂರಿಗೆ ನನ್ನ ಬದುಕಿನ ಪಯಣವನ್ನು ಮುಂದುವರಿಯಿತು. 

ಮೈಸೂರಿನ ವಿಸ್ತೀರ್ಣ ಹಾಗೂ ಜನಸಂಖ್ಯೆ ಬಗ್ಗೆ

ಮೈಸೂರು ಒಂದು ದೃಷ್ಟಿಪಾತ:
ವಿಸ್ತೀರ್ಣ (Area):
ಮೈಸೂರು ನಗರ ವ್ಯಾಪ್ತಿ: ಸುಮಾರು 155 ಚದರ ಕಿಲೋಮೀಟರ್
ಮೈಸೂರು ಜಿಲ್ಲೆ ವ್ಯಾಪ್ತಿ: ಸುಮಾರು 6,854 ಚದರ ಕಿಲೋಮೀಟರ್ ಇದು ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲೊಂದು, ನೈಸರ್ಗಿಕ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದೆ.
ಜನಸ0ಖ್ಯೆ (Population): 2021ರ ಅಂದಾಜು (ಜಾಗತಿಕ ದತ್ತಾಂಶದ ಪ್ರಕಾರ): ಮೈಸೂರು ನಗರ: ಸುತ್ತಮುತ್ತ 12.5 ಲಕ್ಷ 13 ಲಕ್ಷ ಜನರು ವಾಸಿಸುತ್ತಿದ್ದಾರೆ.
ಮೈಸೂರು ಜಿಲ್ಲೆ: ಸುಮಾರು 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. 2011 ಭಾರತದ ಜನಗಣತಿಯ ಪ್ರಕಾರ:
ಮೈಸೂರು ನಗರ: 9,21,559 ಜನ
ಮೈಸೂರು ಜಿಲ್ಲೆ: 30,01,127 ಜನ
ವೃದ್ಧಿ: ಮೈಸೂರು ನಗರದ ಜನಸಂಖ್ಯೆ ತ್ವರಿತವಾಗಿ ಬೆಳೆಯುತ್ತಿದೆ, ವಿಶೇಷವಾಗಿ ಶಿಕ್ಷಣ, ಐಟಿ ಉದ್ಯಮ, ಪ್ರವಾಸೋದ್ಯಮ ಹಾಗೂ ವಾಸಸ್ಥಳಗಳಲ್ಲಿ ಬರುವ ಬದಲಾವಣೆಗಳಿಂದಾಗಿ. 
ಬಾಲಾಜಿಯಿಂದ ನಮ್ಮ ಪ್ರಯಾಣ ಮುಂದುವರಿದ0ತೆ, ಮೈಸೂರಿಗೆ ಕಾಲಿಟ್ಟಾಗ ಅಲ್ಲಿ ಇತಿಹಾಸವೇ ಬಾಯ್ಮಾತಾಡುತ್ತಿರುವಂತೆ ಅನಿಸಿತು. ಅಲ್ಲಿಯ ರಾಜಮಾರ್ಗದಲ್ಲಿ ಮೈನಾರದಂತಿರೋ ಮೈಸೂರು ಅರಮನೆಯ ಪ್ರಭೆ ಎಲ್ಲರನ್ನು ಆಕರ್ಶಿಸದೆ ಇರುವುದಿಲ್ಲ ಬೆಳಗಿನ ಬೆಳಕಿನಲ್ಲಿ ಅರಮನೆಯ ಸವ್ಯವಾದ ಗೋಪುರಗಳು ಬಂಗಾರದ0ತೆ ಮಿನುಗುತ್ತದೆ. ಪಕ್ಕದಲ್ಲಿದ್ದ ಎಲೆಕ್ಟ್ರಿಕ್ ಲ್ಯಾಂಪುಗಳು ರಾತ್ರಿ ಆಗುವವರೆಗೂ ತಮ್ಮ ವೈಭವ ತೋರಿಸಲು ಕಾಯುತ್ತಿರುತ್ತದೆ.
ಮೈಸೂರಿನ ಪ್ರಮುಖ ಸೌಲಭ್ಯಗಳು:
ಮೂರು ವಿಶ್ವವಿದ್ಯಾನಿಲಯಗಳು
ಐಟಿ ಪಾರ್ಕ್ಗಳು, ಶೈಕ್ಷಣಿಕ ಸಂಸ್ಥೆಗಳು
ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಮುಖ ನಗರ ಏರ್‌ಪೋರ್ಟ್, ರೈಲು ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುತ್ತವೆ
ಅರಮನೆಯೊಳಗೆ ಕಾಲಿಟ್ಟಾಗ ಚಿನ್ನದ ಸಿಂಹಾಸನ, ಕನ್ನಡಿ ಮಂಟಪ, ಜರ್ಮನ್ ಲ್ಯಾಂಟರ್ನ್ all spoke of a royal era that once commanded respect and admiration far beyond Mysore’s borders.  ಚಾಮುಂಡಿಬೆಟ್ಟ, ದಸರಾ ಸಂದರ್ಭದಲ್ಲಿಯ ಅಪರೂಪದ ಉತ್ಸವಗಳು, ಪ್ರಾಣಿ ಸಂಗ್ರಹಾಲಯ, ಮತ್ತು ಕಾವೇರಿ ನದಿಯ ಕತೆಗಳಿಂದ ಕೂಡಿದ ಬೃಂದಾವನ ಗಾರ್ಡನ್, ಇವು ಮುಗಿಯದೆ ಹೋಗದ ಅನುಭವಗಳಾಗಿವೆ.

ಮೈಸೂರು ಅರಮನೆ ರಾಜವೈಭವದ ಜೀವಂತ ಸಂಕೇತ

ಮೈಸೂರಿನ ಹೃದಯಭಾಗದಲ್ಲಿರುವ ಅಂಬಾ ವಿಲಾಸ ಅರಮನೆ ಅಥವಾ ಮೈಸೂರು ಅರಮನೆ, ಭಾರತದ ಅತ್ಯಂತ ಸುಂದರ ಹಾಗೂ ಪ್ರಸಿದ್ಧ ಅರಮನೆಗಳಲ್ಲಿ ಒಂದಾಗಿದೆ. ಇದು ಕೇವಲ ರಾಜಮನೆತನದ ವಾಸಸ್ಥಳವಷ್ಟೇ ಅಲ್ಲ, ಕಲೆಯ, ಸಂಸ್ಕೃತಿಯ ಮತ್ತು ಇತಿಹಾಸದ ಉಜ್ವಲ ಚಿಹ್ನೆಯಾಗಿದೆ.

ಇತಿಹಾಸ:

ಈ ಅರಮನೆ ಮೂಲತಃ 14ನೇ ಶತಮಾನದಲ್ಲಿ ನಿರ್ಮಾಣವಾದದ್ದು. ಹಳೆಯ ಅರಮನೆ 1897ರಲ್ಲಿ ಬೆಂಕಿಗೆ ಆಹುತಿಯಾದ ನಂತರ, ಬ್ರಿಟಿಷ್ ವಾಸ್ತುಶಿಲ್ಪಿ ಹೆನ್‌ರಿ ಐರ್ವಿನ್ ಅವರ ರೂಪರೇಖೆಯಲ್ಲಿ, ನವೀಕರಣೆ ಮಾಡಿ 1912ರಲ್ಲಿ ಪೂರ್ಣಗೊಂಡಿತು.

ವಾಸ್ತುಶಿಲ್ಪ

ಅರಮನೆಯ ವಿನ್ಯಾಸದಲ್ಲಿ ಇಂಡೋ-ಸಾರಸೆನಿಕ್ ಶೈಲಿ ಬಳಸಲಾಗಿದೆ ಇದು ಹಿಂದೂ, ಮುಸ್ಲಿಂ, ರಾಜಪೂತ ಮತ್ತು ಗೋಥಿಕ್ ಶೈಲಿಯ ಮಿಶ್ರಣ. ಮರಳುಗಲ್ಲುಗಳಿಂದ ನಿರ್ಮಿತ ಅರಮನೆ, ಗುಂಬಜುಗಳು, ಕುಂಬಗಳು, ವಜ್ರದ ಹಂಚಿಕೆಗಳು, ರಂಗಿನ ಗಾಜುಗಳ ಕಿಟಕಿಗಳು. ಚಿನ್ನದ ಸಿಂಹಾಸನ, ಬಿರುದಾಂಕಿತ ಕುರ್ಚಿಗಳು, ಬರ್ಮಾದ ಟೀಕ್ ಮರದ ಕೆಲಸ, ಮತ್ತು ಬಣ್ಣದ ಕಚ್ಚಾ ಗಾಜುಗಳು ಕಣ್ಣಿಗೆ ಹಬ್ಬ.

ಬೆಳಕು-ದೀಪಾಲಂಕಾರ

ಪ್ರತೀ ಭಾನುವಾರ ಮತ್ತು ರಜಾದಿನಗಳಲ್ಲಿ ಅರಮನೆಯು ಲಕ್ಷಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳುತ್ತದೆ, ಅದು ನೋಡಲು ಒಂದು ಕನಸುತೋಚುವ ದೃಶ್ಯ. ದಸರಾ ಹಬ್ಬದ ಸಮಯದಲ್ಲಿ ಅರಮನೆಯ ದೀಪಾಲಂಕಾರ ಮತ್ತು ಜಂಬೂ ಸವಾರಿ ವೀಕ್ಷಿಸಲು ಲಕ್ಷಾಂತರ ಪ್ರವಾಸಿಗರು ಬರುತ್ತಾರೆ.

ಒಳಾಂಗಣ ವೈಭವ:

ಅರಮನೆಯೊಳಗೆ ಜಗತ್ತಿನ ವಿವಿಧೆಡೆಗಳ ಕಲಾಕೃತಿಗಳು, ಚಲನಚಿತ್ರ ಶೈಲಿಯ ಗ್ಯಾಲರಿಗಳು, ಪೇಂಟಿ0ಗ್‌ಗಳು ಇವೆ. ದರ್ಬಾರ್ ಹಾಲ್, ಕನ್ನಡಿ ಮಂಟಪ, ಶೃಂಗಾರ ಕೋಣೆ, ಇವೆಲ್ಲವೂ ಪ್ರತಿ ಹೆಜ್ಜೆಗೂ ಚಿಕ್ಕಪುಟ್ಟ ಚಿಕ್ಕಣಿಗಳಿಂದ ಕೂಡಿವೆ.
ನಿರ್ಮಾಣ ವೆಚ್ಚ: ಅಂದಿನ ಕಾಲದಲ್ಲಿ ಸುಮಾರು 41 ಲಕ್ಷ ರೂ.

ಶ್ರೇಷ್ಟ ರಾಜಮನೆತನದ ಪಾಲನೆಯಡಿಯಲ್ಲಿ:

ಮೈಸೂರು ಅರಮನೆ ರಾಜ ಒಡೆಯರ್ ವಂಶಪಾರAಪರ್ಯದ ಸಿಂಹಾಸನವಾಗಿದೆ. ಇದು ನಿಜವಾಗಿ ನಾಡಿನ ರಾಜಕೀಯ, ಸಾಂಸ್ಕೃತಿಕ ಮತ್ತು ಕಲಾತ್ಮಕ ಕೇಂದ್ರವಾಯಿತು. ಈಗ ಕರ್ನಾಟಕ ಸರ್ಕಾರದ ಆಡಳಿತದಡಿಯಲ್ಲಿ ಸಂರಕ್ಷಿತ ದಾರ್ಶನಿಕ ಕೇಂದ್ರವಾಗಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಇತ್ತೆ ಬರುತ್ತಾರೆ.

ಪ್ರವಾಸಿಗರಿಗೆ

ಪ್ರವಾಸಿಗರಿಗೆ ಇದು ಮುಕ್ತವಾಗಿದೆ (ಪ್ರವೇಶ ಶುಲ್ಕವಿದೆ) ಒಳಗೆ ಗೈಡ್ ಸೇವೆ ಹಾಗೂ ಆಡಿಯೋ ಟೂರ್ ಕೂಡ ಲಭ್ಯವಿದೆ. ಅರಮನೆಯ ಸುತ್ತಲೂ ಉದ್ಯಾನವನಗಳು, ಕೆರೆಗಳು, ಮತ್ತು ಸ್ಥಳೀಯ ಹಸ್ತಕಲಾ ಮೇಳಗಳಿವೆ.
ಮೈಸೂರು ಅರಮನೆ ಎಂದರೆ: "ಇದು ಕಣ್ಣಿಗೆ ಹಬ್ಬ, ಇತಿಹಾಸಕ್ಕೆ ಪ್ರವೇಶ, ಮತ್ತು ಮನಸ್ಸಿಗೆ ಸಂತೋಷ!" 



ಅರಮನೆಗಳ ನಗರ ಮೈಸೂರು
ಲಲಿತ ಮಹಲ್ ಅರಮನೆಯ ಸುಂದರ, ಆಕರ್ಷಕ ಮೈಸೂರಿನ ಬಿಳಿ ಮಣಿ ಮೈಸೂರಿನ ದಕ್ಷಿಣ ಭಾಗದಲ್ಲಿ, ಚಾಮುಂಡಿಬೆಟ್ಟದ ತುದಿಗೆ ಹತ್ತಿರ, ವಿಶಾಲ ಹಸಿರು ತೋಟಗಳ ನಡುವೆ ರಾಜಾಸ್ಥಾನೀಯ ಶೈಲಿಯಲ್ಲಿ ಹೊಳೆಯುವ ಬಿಳಿ ಅರಮನೆ. ಇದನ್ನು ನೋಡಿದರೆ ನಿಮಗೆ ಬ್ರಿಟಿಷ್ ರಾಜಶಾಹಿ ಅಥವಾ ಯುರೋಪಿನ ಅರಮನೆಗಳ ಝಲಕ್ ಕಾಣಿಸುತ್ತವೆ.

ಇತಿಹಾಸ

ಈ ಅರಮನೆ 1921ರಲ್ಲಿ ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಿಟಿಷ್ ವೈಸರಾಯ್‌ಗಾಗಿ ನಿರ್ಮಿಸಿದ್ದು ಇದನ್ನು ಯೂನಾನ್ ಮತ್ತು ರೋಮನ್ ಶೈಲಿಯ ಕಲೆಯೊಂದಿಗೆ ರೂಪಿಸಲಾಗಿದೆ.

ವಾಸ್ತುಶಿಲ್ಪಿ

ವಾಸ್ತು ವೈಶಿಷ್ಟ್ಯಗಳು: ಈ ಮಹಲ್‌ನ್ನು ಶುದ್ಧ ಬಿಳಿ ಬಣ್ಣದಲ್ಲಿ ನಿರ್ಮಿಸಲಾಗಿದ್ದು, ಇದನ್ನು “ಬಿಳಿ ಅರಮನೆ” ಎಂದೂ ಕರೆಯುತ್ತಾರೆ. ಡೋಮ್ (ಗುಂಬಜ) ಮತ್ತು ಪಿಲ್ಲರ್‌ಗಳು (ಕಂಬಗಳು) ಯುರೋಪಿಯನ್ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ಸೆಂಟ್ರಲ್ ಹಾಲ್, ಮಾರ್ಬಲ್ ಫ್ಲೋರ್, ಮತ್ತು ಬ್ರಾಸ್ ಲ್ಯಾಂಪುಗಳು ಆಂತರಿಕ ಭವ್ಯತೆಯನ್ನು ಹೆಚ್ಚಿಸುತ್ತವೆ.

ಇಂದಿನ ಸ್ಥಿತಿ

ಇಂದು ಅಯ್ಯರ್‌ವಾಡ ಗ್ರೂಪ್‌ನ ಹೆರಿಟೇಜ್ ಹೋಟೆಲ್ ಆಗಿ ಇದನ್ನು ಬಳಸಲಾಗುತ್ತಿದೆ. ಪ್ರವಾಸಿಗರಿಗೆ ಇಲ್ಲಿನ ಅಂತರAಗವನ್ನು ವೀಕ್ಷಿಸಲು ಅವಕಾಶವಿದ್ದು, ನೀವು ಇಲ್ಲಿ ತಂಗಬಹುದು. ಮೈಸೂರಿನಲ್ಲಿ ಶಾಂತಿ, ವೈಭವ ಮತ್ತು ರಾಜವೈಭವ ಅನುಭವಿಸಬೇಕೆಂದರೆ, ಈ ಸ್ಥಳ ಸರಿಯಾದ ಆಯ್ಕೆ.

ಚಲನಚಿತ್ರ ಛಾಯಾಗ್ರಹಣ ಸ್ಥಳ

ಲಲಿತ ಮಹಲ್ ಹಲವು ಕನ್ನಡ, ತಮಿಳು ಮತ್ತು ಹಿಂದಿ ಚಿತ್ರಗಳ ಪೌರಾಣಿಕವಾಗಿ ಕಾರ್ಯನಿರ್ವಹಿಸಿದೆ.
ಸುತ್ತಲ ಪರಿಸರ

ಹಸಿರು ತೋಟಗಳು, ಚಾಮುಂಡಿಬೆಟ್ಟದ ಹಾವುಹೆಜ್ಜೆಯ ರಸ್ತೆ, ಮತ್ತು ನೈಸರ್ಗಿಕ ಮೌನತೆಯು ಇದನ್ನು ಇನ್ನಷ್ಟು ಆಕರ್ಷಕಗೊಳಿಸುತ್ತವೆ. ಲಲಿತ ಮಹಲ್ ಎಂದರೆ: "ಇದು ರಾಜಾಶ್ರಯ ಮತ್ತು ಶಾಂತಿಯ ಸಂಯೋಜನೆಯ ಘನತೆಯ ಪ್ರತೀಕ! ದಕ್ಷಿಣ ಭಾರತದ ಬಿಳಿ ಅರಮನೆ!**"


ಅರಮನೆಗಳ ನಗರ ಮೈಸೂರು
ಜೆಎಸ್‌ಎಸ್‌ವಿದ್ಯಾ ಸಂಸ್ಥೆಯ ಬಗ್ಗೆ

ನಾನು ವಿದ್ಯಾಬ್ಯಾಸ ಮಾಡಿದ ಸಂಸ್ಥೆ ಜೆ.ಎಸ್.ಎಸ್ ಮೈಸೂರಿನಲ್ಲಿ ನೆಲೆಯೂರಿರುವ ಜೆಎಸ್‌ಎಸ್  – ವಿದ್ಯಾ ಸಂಸ್ಥೆ ಎಂದರೆ ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುತ್ತಿರುವ ಮಹಾ ಸಂಸ್ಥೆ. ಇದರ ಪೂರ್ಣ ಹೆಸರು
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ವಿದ್ಯಾಪೀಠ – JSS Mahavidyapeetha 
ವಿದ್ಯಾ ಸಂಸ್ಥೆ ಒಂದು ಪರಿಚಯ

ಸ್ಥಾಪಿತವಾದ ವರ್ಷ: 1954
ಸ್ಥಾಪಕರಾದವರು: ಪರಮಪೂಜ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು.
ಉದ್ದೇಶ: ಗ್ರಾಮೀಣ ಹಾಗೂ ಶೋಷಿತ ಜನರಿಗೆ ಗುಣಮಟ್ಟದ ಶಿಕ್ಷಣವನ್ನು ಪೂರೈಸುವುದು.
ಎSS ಸಂಸ್ಥೆಯ ಅಡಿಯಲ್ಲಿ ಇರುವ ಪ್ರಮುಖ ಸಂಸ್ಥೆಗಳು:
1. JSS Science & Technology University (SJCE, Mysuru)
ಮೈಸೂರಿನ ಅತ್ಯಂತ ಖ್ಯಾತ ಎಂಜಿನಿಯರಿ0ಗ್ ಕಾಲೇಜು.
ಹಿಂದಿನ ಹೆಸರು: Sri Jayachamarajendra College of Engineering (SJCE)
ಶಿಕ್ಷಣ + ಸಂಶೋಧನೆ = ಉನ್ನತ ಮಟ್ಟ.
ಹಲವು ಐಟಿ ಮತ್ತು ಒಓಅ ಕಂಪನಿಗಳ ನೇಮಕಾತಿಗೆ ಪ್ರಮುಖ ಕೇಂದ್ರ.
2. JSS Medical College, Mysuru ಅತ್ಯಂತ ಹೆಸರಾಂತ ವೈದ್ಯಕೀಯ ಕಾಲೇಜುಗಳಲ್ಲಿ ಒಂದು.
ಶ್ರೀಜಯದೇವ ಆಸ್ಪತ್ರೆಯ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಳೆಯದಿಂದ ತಂತ್ರಜ್ಞಾನ ಬಳಕೆಯವರೆಗೆ ಉತ್ತಮ ತಾಂತ್ರಿಕ ಸಲಕರಣೆ.
3. JSS Dental College, Pharmacy College, Nursing College
ವಿವಿಧ ವೈದ್ಯಕೀಯ ಶಾಖೆಗಳಲ್ಲಿ ಉನ್ನತ ಶಿಕ್ಷಣ.
ಅತ್ಯಧುನಿಕ ಲ್ಯಾಬ್, ಅನುಭವೀ ಬೋಧಕ ಸಿಬ್ಬಂದಿ.
4. JSS Public School(s)
ಕರ್ನಾಟಕದಾದ್ಯಂತ ಮತ್ತು ದೇಶದ ಬೇರೆ ಭಾಗಗಳಲ್ಲೂ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್ಸ್. ಈ ಸಂಸ್ಥೆಯಲ್ಲಿಯೇ ನಾನು ಓದಿ ಈ ಲೇಖಕನ ನಿಮ್ಮ ಮುಂದೆ ಇಡುತ್ತಿದ್ದೇನೆ.
5. JSS Polytechnic, Arts, Commerce Colleges
ವಿದ್ಯಾ ಕ್ಷೇತ್ರದಲ್ಲಿ ಎಲ್ಲಾ ಮಟ್ಟದ ವಿದ್ಯಾರ್ಥಿಗಳಿಗೆ ಅವಕಾಶ. ಹತ್ತಾರು ವಿದ್ಯಾರ್ಥಿಗಳು   JSS  ಮೂಲಕ ಬದುಕಿನಲ್ಲಿ ಬೆಳಕಿಗೆ ಬಂದಿದ್ದಾರೆ.
ಇಡೀ ಭಾರತ ಮತ್ತು ವಿದೇಶಕ್ಕೂ ವಿಸ್ತರಣೆ:
 JSS ಸಂಸ್ಥೆಗೆ ಕರ್ಣಾಟಕದ ಹೊರಗಾದ್ದೂ ಶಾಲೆಗಳು ಮತ್ತು ಕಾಲೇಜುಗಳಿವೆ. ಒಡಿಶಾ, ಉತ್ತರಾಖಂಡ, ತಮಿಳುನಾಡು, ಮತ್ತು ದಕ್ಷಿಣ ಆಫ್ರಿಕಾದಲ್ಲೂ ಸಂಸ್ಥೆಯ ಶಾಖೆಗಳು ಇವೆ.

ಆಧ್ಯಾತ್ಮಿಕ ನೆಲೆ:

 JSS ವಿದ್ಯಾಪೀಠವು ಶ್ರೀ ಕ್ಷೇತ್ರ ಶ್ರೀವೀರಶೈವ ಮಹಾಸಂಸ್ಥಾನ, ಸುತ್ತೂರು ಮಠ, ಮೈಸೂರಿನ ಆಡಳಿತಾಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಶಿಕ್ಷಣ, ಆರೋಗ್ಯ, ಗ್ರಾಮೋತ್ತಾನ, ಧರ್ಮ ಮತ್ತು ಸಂಸ್ಕೃತಿಯ ಸೇವೆಯಲ್ಲಿ ತೊಡಗಿರುವ ಸಂಸ್ಥೆ.
 JSS ಎಂದರೆ: "ಜ್ಞಾನ, ಶಿಸ್ತು ಮತ್ತು ಸೇವೆಯ ಹಾದಿಯಲ್ಲಿ ದೀಪವನ್ನಿಟ್ಟಿರುವ ಬೆಳಕು." 

ಉಪಸಂಹಾರ

ಮೈಸೂರಿನ ಬಗ್ಗೆ ಬರೆಯಲು ಒಂದು ಲೇಖನ ಸಾಲುವುದಿಲ್ಲ ಮೈಸೂರಿನ ಪ್ರಕೃತಿ: ಚಾಮುಂಡಿಬೆಟ್ಟ, ಲಾಲ್‌ಬಾಗ್ ಜಗನ್‌ಮೊಹನ್ ಅರ್ಟ್ ಗ್ಯಾಲರಿ, ಸಂಸ್ಕೃತಿ ಕೇಂದ್ರಗಳು ಮೈಸೂರು ಮಾಸಾಲೆ ದೋಸೆ, ಮೈಸೂರು ಪಾಕ್ ರುಚಿಗಳ ಕಥೆ ದಸರಾ ಉತ್ಸವ ಲೋಕೋತ್ಸವದ ವೈಭವ ಒಂದೇ ಎರಡೇ ಇನ್ನೂ ಹೇಳಬೇಕು ಎಂದರೆ ಹೆಬ್ಬೆ ಫಾಲ್ಸ್, ಶ್ರವಣಬೆಳಗೊಳ, ತಲಕಾಡು ಹೀಗೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ ಆದರೂ ನಾನು ಎಲ್ಲಾವನ್ನು ವಿವರಿಸುತ್ತೇನೆ.
ಧನ್ಯವಾದಗಳು:
ಮುಂದುವರಿಯುತ್ತದೆ.
ಅರಮನೆಗಳ ನಗರ ಮೈಸೂರು
ಪಿವಿ ಪ್ರದೀಪ್ ಕುಮಾರ್
ಅರಮನೆಗಳ ನಗರ ಮೈಸೂರು
ಅರಮನೆಗಳ ನಗರ ಮೈಸೂರು

Comments (0)




Be the first to comment using the form below.